Close

ಇ-ಸ್ಪಂದನ: ಸಾರ್ವಜನಿಕ ಕುಂದುಕೊರತೆ ಮಾನಿಟರಿಂಗ್ ವ್ಯವಸ್ಥೆ

ಇ-ಸ್ಪಂದನ ಬಳ್ಳಾರಿ ಜಿಲ್ಲೆಯ ಸಾರ್ವಜನಿಕರ ಕುಂದುಕೊರತೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಒಂದು ವಿಶಿಷ್ಟವಾದ ಪರಿಕಲ್ಪನೆಯಾಗಿದೆ. ಇದಕ್ಕಾಗಿ ಜಿಲ್ಲಾಡಳಿತವು 24*7 ಕಾರ್ಯನಿರ್ವಹಿಸುವ ಕಂಟ್ರೋಲ್‌ ರೂಮ್‌ ಸ್ಥಾಪನೆ ಮಾಡಿದ್ದು ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ವಾಟ್ಸ್‌ಆಪ್‌ ಮೂಲಕ, ಇ-ಮೇಲ್‌ ಮೂಲಕ ಅಥವಾ ದೂರವಾಣಿಯ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕುಂದುಕೊರತೆ ಕೇಂದ್ರದಲ್ಲಿ ನಿಮ್ಮ ದೂರು ದಾಖಲಿಸಿದ ಬಳಿಕ ಸಾರ್ವಜನಿಕರಿಗೆ S M S ಮೂಲಕ ವೆಬ್ ಲಿಂಕ್‌ ಬರಲಿದ್ದು, ಅದರಿಂದ ಅವರು ತಮ್ಮ ಕುಂದುಕೊರತೆಯ ಸ್ಥಿತಿಗತಿಗಳನ್ನು ವೀಕ್ಷಿಸಬಹುದು. ಕುಂದುಕೊರತೆ ಕೇಂದ್ರದವರು ಹೀಗೆ ದಾಖಲಿಸದ ದೂರುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಆನ್ ಲೈನ್ ಮೂಲಕ ಕಳುಹಿಸುತ್ತಾರೆ. ಸಂಬಂಧಪಟ್ಟ ಅಧಿಕಾರಿಯು ತಮ್ಮ ಮೊಬೈಲ್ ಗೆ S M S ಮೂಲಕ ಬಂದ ವೆಬ್ ಲಿಂಕ್‌ ಉಪಯೋಗಿಸಿ ತಮ್ಮ ಕ್ರಮವನ್ನು ನಮೂದಿಸುತ್ತಾರೆ. ಸಾರ್ವಜನಿಕರು ಹಾಗು ಅಧಿಕಾರಿಗಳು ದಾಖಲೆ ಹಾಗು ಫೋಟೋಗಳನ್ನು ಅಪ್ಲೋಡ್‌ ಮಾಡಲು ಇರದಲ್ಲಿ ಅವಕಾಶವಿರುತ್ತದೆ. ಈ ಕುಂದುಕೊರತೆಗಳ ಪ್ರಗತಿಯನ್ನು ಜಿಲ್ಲಾಡಳಿತವು ಪ್ರತಿದಿನವೂ ಪರಿಶೀಲಿಸುವುದರಿಂದ ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆಯು ಒಂದು ಹೊಸ ಭರವಸೆಯಾಗಿದೆ.

Spandana

ಪಿ.ಜಿ.ಸಿ ಕೇಂದ್ರ

ಡಿಸಿ ಕಛೇರಿ,,ಬಳ್ಳಾರಿ
ನಗರ : ಬಳ್ಳಾರಿ | ಪಿನ್ ಕೋಡ್ : 583101
ದೂರವಾಣಿ : 08392-277100 | ಮೊಬೈಲ್ : 8277888866 | ಇಮೇಲ್ : dcbellary[at]gmail[dot]com