Close

ಜಿಲ್ಲಾಧಿಕಾರಿಗಳ ಕಾರ್ಯಾಲಯ

ಜಿಲ್ಲೆಯು ನಮ್ಮ ದೇಶದಲ್ಲಿ ಮೂಲಭೂತ ಆಡಳಿತ ಘಟಕವಾಗಿದೆ. ಜಿಲ್ಲೆಯ ಆಡಳಿತಶಾಹಿ ಮತ್ತು ಅದರ ರಚನೆಯ ಪರಿಕಲ್ಪನೆಯು ಒಂದು ಶತಮಾನಕ್ಕಿಂತಲೂ ಹಿಂದಿನದಾಗಿದೆ. ಜಿಲ್ಲಾ ಆಡಳಿತದ ಮುಖ್ಯಸ್ಥರು ಭಾರತ ಆಡಳಿತಾತ್ಮಕ ಸೇವೆಯಿಂದ ತೆಗೆದುಕೊಳ್ಳಲ್ಪಟ್ಟ ಜಿಲ್ಲಾಧಿಕಾರಿ/ ಜಿಲ್ಲೆಯ ದಂಡಾಧಿಕಾರಿ/ ಉಪ ಆಯುಕ್ತರಾಗಿರುತ್ತಾರೆ.

ಜಿಲ್ಲೆಯ ಹೆಚ್ಚಿನ ಅಭಿವೃದ್ಧಿ ಚಟುವಟಿಕೆಗಳು ವಿವಿಧ ಇಲಾಖೆಗಳಿಂದ ನಡೆಸಲ್ಪಟ್ಟಿದ್ದರೂ ಸಹ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕರಾಗಿ ಹಾಗು ಕಂದಾಯ ಇಲಾಖೆಯ ಮುಖ್ಯಸ್ಥರಾಗಿ ಜಿಲ್ಲಾಧಿಕಾರಿಯವರು ( ಹಾಗು ಜಿಲ್ಲಾ ದಂಡಾಧಿಕಾರಿಗಳು)  ಜಿಲ್ಲೆಯಲ್ಲಿ ಜಾರಿಗೊಳಿಸಲಾದ ಕಾರ್ಯಕ್ರಮಗಳ ಸಂಯೋಜಕರಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಜಿಲ್ಲೆಯ ಕಂದಾಯ ಇಲಾಖೆಯ ಉಪವಿಭಾಗಗಳ ಮುಖ್ಯಸ್ಥರಾಗಿ, ಸಹಾಯಕ ಆಯುಕ್ತರು ಉಪವಿಭಾಗದ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವವರಾಗಿದ್ದಾರೆ.

ಸಹಾಯಕ ಆಯುಕ್ತರುಗಳು ಜಿಲ್ಲಾಧಿಕಾರಿಗಳಿಗೆ ಉಪವಿಭಾಗದ ಮಟ್ಟದಲ್ಲಿ ಸಹಾಯ ಮಾಡುತ್ತಾರೆ, ಅವರು ಕಂದಾಯ ಉಪ-ವಿಭಾಗ ಎಂದು ಕರೆಯಲ್ಪಡುವ ಒಂದು ಅಥವಾ ಹೆಚ್ಚಿನ ತಾಲೂಕುಗಳ ಕಂದಾಯ ನಿರ್ವಹಣೆಯ ಉಸ್ತುವಾರಿ ವಹಿಸುತ್ತಾರೆ ಮತ್ತು ತಾಲ್ಲೂಕುಗಳ ಕಂದಾಯ ಆಡಳಿತದ ಉಸ್ತುವಾರಿಯನ್ನು ತಹಸಿಲ್ದಾರರು ವಹಿಸುತ್ತಾರೆ.

ಬಳ್ಳಾರಿ ಜಿಲ್ಲೆಯಲ್ಲಿ 1 ಕಂದಾಯ ಉಪವಿಭಾಗವಿದ್ದು ಅದು ಬಳ್ಳಾರಿ ಆಗಿರುತ್ತದೆ ಮತ್ತು  ಬಳ್ಳಾರಿ, ಸಿರುಗುಪ್ಪ, ಕುರುಗೊಡು, ಸಂಡೂರು ಮತ್ತು ಕಂಪ್ಲಿ  ಹೀಗೆ ಐದು ತಾಲ್ಲೂಕುಗಳು ಇರುತ್ತವೆ.  ಜಿಲ್ಲಾಧಿಕಾರಿಗಳ ಬಳ್ಳಾರಿ ರೈಲ್ವೆ ನಿಲ್ದಾಣದ ಸಮೀಪ ನಗರದ ಹೃದಯ ಭಾಗದಲ್ಲಿದೆ. ಜಿಲ್ಲಾಧಿಕಾರಿಗಳ ಕಚೇರಿಯು ಭೂಮಿ, ಕಾನೂನು ಮತ್ತು ಸುವ್ಯವಸ್ಥೆ, ಸಾರ್ವಜನಿಕ ಕುಂದುಕೊರತೆಗಳನ್ನು ನಿವಾರಿಸಲು ಹಲವಾರು ವಿಭಾಗಗಳನ್ನು ಹೊಂದಿದೆ. ಜಿಲ್ಲಾಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ), ಚುನಾವಣಾ ತಹಶೀಲ್ದಾರ್, ಶಿರಸ್ತೇದಾರು ಮತ್ತು ವಿವಿಧ ವಿಭಾಗಗಳ ವಿಷಯ ನಿರ್ವಾಹಕರಗಳು ಕಛೇರಿ ಕೆಲಸಗಳನ್ನು ನಿರ್ವಹಿಸುವುರಲ್ಲಿ ಸಹಾಯ ಮಾಡುತ್ತಾರೆ.

 

ಹೆಸರು ಪದನಾಮ
  ಪ್ರಶಾಂತ್ ಕುಮಾರ್ ಮಿಶ್ರಾ , ಭಾ.ಆ.ಸೇ. ಜಿಲ್ಲಾಧಿಕಾರಿಗಳು