ತಲುಪುವ ಬಗೆ

ಬಳ್ಳಾರಿಯು ಕರ್ನಾಟಕ ಮತ್ತು ನೆರೆಯ ರಾಜ್ಯಗಳ ಪ್ರಮುಖ ನಗರಗಳಿಗೆ ರಸ್ತೆ ಮತ್ತು ರೈಲು ಸಂಪರ್ಕವನ್ನು ಹೊಂದಿದೆ. ನೀವು ವಿಮಾನ, ರೈಲು ಅಥವಾ ಬಸ್ ಮೂಲಕ ಪ್ರಯಾಣಿಸಬಹುದಾಗಿದ್ದು, ಬಳ್ಳಾರಿಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ ನಿಯಮಿತ ವಿಮಾನಗಳು ಜಿಂದಾಲ್ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಲಭ್ಯವಿವೆ.

ತಲುಪುವ ಬಗೆ
ಸಾರಿಗೆ ಸಂಪರ್ಕ

 

ರಸ್ತೆ

ಬಳ್ಳಾರಿ ಜಿಲ್ಲೆಯು ಬಸ್ ವ್ಯವಸ್ಥೆಯ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಂಪರ್ಕ ಹೊಂದಿದೆ. ಕರ್ನಾಟಕದ ಎಲ್ಲಾ ಪ್ರಮುಖ ನಗರಗಳಿಗೆ ಮತ್ತು ನೆರೆಯ ರಾಜ್ಯಗಳ ನಗರಗಳಿಗೂ ಬಸ್ಸುಗಳು ಲಭ್ಯವಿವೆ..

 

ರೈಲು

ಬಳ್ಳಾರಿಯು ರೈಲಿನ ಮೂಲಕ ಬೆಂಗಳೂರು, ರಾಯಚೂರು, ತಿರುಪತಿ, ಹುಬ್ಬಳ್ಳಿ, ಗುಂತಕಲ್ ,ವಿಜಯವಾಡ,ಗುಂತಕಲ್ ಇನ್ನಿತರ ಅನೇಕ ಪ್ರಮುಖ ನಗರಗಳಿಗೆ ರೈಲುಗಳು ಹಾದುಹೋಗುವ, ಪ್ರಮುಖ ಜಂಕ್ಷನ್ ಆಗಿದೆ ದೆಹಲಿ, ಚೆನ್ನೈ, ಮುಂಬೈ ಮತ್ತು ಭಾರತದ ಹೆಚ್ಚಿನ ಸ್ಥಳಗಳಿಗೆ ರೈಲುಗಳು ಈ ಜಂಕ್ಷನ್ನಿಂದ ರೈಲುಗಳು ಲಭ್ಯವಿರುತ್ತವೆ.

 

ವಾಯುಮಾರ್ಗ

ಬಳ್ಳಾರಿಗೆ ಅತ್ಯಂತ ಹತ್ತಿರದ ವಿಮಾನ ನಿಲ್ದಾಣವೆಂದರೆ ಸುಮಾರು 30 ಕಿ.ಮೀ ದೂರದಲ್ಲಿರುವ ಜಿಂದಾಲ್ ವಿಮಾನ ನಿಲ್ದಾಣ, ಇಲ್ಲಿಂದ ಬೆಂಗಳೂರಿಗೆ ಪ್ರತಿದಿನ ವಿಮಾನ ಸೌಲಭ್ಯವಿದೆ.