ಬಳ್ಳಾರಿ ಕೋಟೆ
ಇತಿಹಾಸ: ಬಳ್ಳಾರಿ ಕೋಟೆಯನ್ನು ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಹಳಮಪ್ಪ ನಾಯಕ ಎಂಬ ಪಾಳೆಯಗಾರ ನಿರ್ಮಿಸಿದ. ಹೈದರ್ ಅಲಿ 18 ನೇ ಶತಮಾನದಲ್ಲಿ ಈ ಪ್ರದೇಶವನ್ನು ವಶಪಡಿಸಿಕೊಂಡು ಇನ್ನೊಂದು ಸುತ್ತು ಕೋಟೆಯನ್ನು (ಕೆಳ ಕೋಟೆ) ನಿರ್ಮಿಸುವ ಮೂಲಕ ಕೋಟೆಯ ಪ್ರದೇಶವನ್ನು ವಿಸ್ತರಿಸಿದರು. ಜೊತೆಗೆ ಮೂಲ ಬಳ್ಳಾರಿ ಕೋಟೆಯನ್ನು ನವೀಕರಿಸಲು / ಬಲಪಡಿಸಲು (ಮೇಲಿನ ಕೋಟೆ ಎಂದು ಕರೆಯಲಾಗುತ್ತದೆ) ಫ್ರೆಂಚ್ ಎಂಜಿನಿಯರ್‌ಗಳನ್ನು ನಿಯೋಜಿಸಲಾಗಿತ್ತು ಎಂದು ನಂಬಲಾಗಿದೆ.
ಮೇಲಿನ ಕೋಟೆ: ಬಳ್ಳಾರಿ ಬೆಟ್ಟದ ಮೇಲಿನ ಕೋಟೆಯಲ್ಲಿ ಇಗರ್ಜಿ, ದೇವಾಲಯ, ಸೈನಿಕರಿಗೆ ಬೇಕಾದ ಬ್ಯಾರಕ್‌ಗಳು, ನೀರಿನ ಸಂಗ್ರಹಕ್ಕಾಗಿ ಆಳವಾದ ಬಾವಿಗಳು ಇವೆ.
ಕೆಳಗಿನ ಕೋಟೆ: ಕೆಳಗಿನ ಕೋಟೆಯಲ್ಲಿ ಎರಡು ಪ್ರವೇಶ ದ್ವಾರಗಳಿವೆ, ಪಶ್ಚಿಮ ಮತ್ತು ಪೂರ್ವ ಭಾಗದಲ್ಲಿ ತಲಾ ಒಂದು. ಕೆಳಗಿನ ಕೋಟೆಯನ್ನು ಹಲವಾರು ಬುರುಜುಗಳಿಂದ ಭದ್ರಪಡಿಸಲಾಗಿದೆ, ಅಲ್ಲದೆ ಸುತ್ತಲೂ ಆಳವಾದ ಹೊಂಡಗಳಿಂದ ( ನೀರಿನಿಂದ ತುಂಬಿರುತ್ತವೆ ಮತ್ತು ಮೊಸಳೆಗಳುರುತ್ತವೆ) ಇನ್ನಷ್ಟು ಅಭೇದ್ಯಗೊಳಿಸಲಾಗಿದೆ. ಕೋಟೆ ಅಂಜನೇಯ ದೇವಸ್ಥಾನವನ್ನು (ಹನುಮಾನ್ ದೇವಸ್ಥಾನ) ಕೆಳ ಕೋಟೆಯಲ್ಲಿ ಕಾಣಬಹುದು. ಕೆಳಗಿನ ಕೋಟೆಯಲ್ಲಿ ಯುದ್ಧದ ಸಂದರ್ಭದಲ್ಲಿ ನಿರಾಶ್ರಿತರು ಅಥವಾ ಗ್ರಾಮಸ್ಥರಿಗೆ ಸ್ಥಳಾವಕಾಶವಿದೆ.
ಫೋಟೋ ಗ್ಯಾಲರಿ
ತಲುಪುವ ಬಗೆ :
ಜಿಂದಾಲ್ ವಿಜಯನಗರ ವಿಮಾನನಿಲ್ದಾಣ (ದರೋಜಿಯಿಂದ 38 ಕಿ.ಮೀ.) ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಯುಡಿಎಎನ್ ಯೋಜನೆಯಡಿ ದೈನಂದಿನ ವಿಮಾನಗಳು ಲಭ್ಯವಿದೆ. ದರೋಜಿಯಿಂದ 150 ಕಿ.ಮೀ ದೂರದಲ್ಲಿರುವ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿಮಾನಗಳು ಲಭ್ಯವಿದೆ.
ಹೊಸಪೇಟೆ ಮತ್ತು ತೋರಣಗಲ್ಲು ಹತ್ತಿರದ ರೈಲ್ವೆ ನಿಲ್ದಾಣಗಳು, ಇವು ದರೋಜಿನಿಂದ 20 ಕಿ.ಮೀ ದೂರದಲ್ಲಿರುತ್ತವೆ. ಹುಬ್ಬಳ್ಳಿ ಮತ್ತು ಗುಂಟಕಲ್ ಜಂಕ್ಷನ್ನಿಂದ ಹೊಸಪೇಟೆ / ತೋರಣಗಲ್ಲು ವರೆಗೆ ದೈನಂದಿನ ರೈಲುಗಳು ಲಭ್ಯವಿದೆ.
ಬಳ್ಳಾರಿ ಜಿಲ್ಲೆಯು ಬಸ್ಸುಗಳಿಂದ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಂಪರ್ಕ ಹೊಂದಿದೆ. ಕರ್ನಾಟಕದ ಎಲ್ಲಾ ಪ್ರಮುಖ ನಗರಗಳಿಗೆ ಬಳ್ಳಾರಿ (ದರೋಜಿಯಿಂದ 65 ಕಿ.ಮೀ) ಮತ್ತು ಹೊಸಪೇಟೆ (20 ಕಿ.ಮೀ ದೂರದಲ್ಲಿರುವ ದರೋಜಿ) ಗೆ ಬಸ್ಸುಗಳು ಲಭ್ಯವಿದೆ.