ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಬಳ್ಳಾರಿ
ಯೋಜನೆಗಳ ಹೆಸರು |
ಯೋಜನೆಗಳ ವಿವರ |
ಸರಕಾರದ ಅನುದಾನ ಸಾಮಾನ್ಯ ಸಂಗ್ರಹಣ ನಿಧಿ ವಿಶೇಷ ಘಟಕ ಯೋಜನೆಗಳಡಿ ಸರಕಾರದ ಅನುದಾನ |
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳು ಕಾಯ್ದೆ 1997 ತಿದ್ದುಪಡಿ 2011 ರ ಅಧ್ಯಾಯ 4 ನಿಯಮ 17 (ಎ) ರಂತೆ ಅಧಿಸೂಚಿತ ‘ಎ’ ಮತ್ತು ‘ಬಿ’ ದೇವಸ್ಥಾನಗಳ ಆದಾಯದ ಶೇಕಡಾ 10 ಮತ್ತು 5 ರಷ್ಟು ಹಣವನ್ನು ಸಾಮಾನ್ಯ ಸಂಗ್ರಹಣ ವಂತಿಕೆ ರೂಪದಲ್ಲಿ ಸಂಗ್ರಹ ಮಾಡಲಾಗುವುದು. ಆರ್ಥಿಕವಾಗಿ ದುರ್ಬಲವಾಗಿರುವ ಮತ್ತು ವಾರ್ಷಿಕವಾಗಿ ಯಾವುದೇ ಆದಾಯ ಹೊಂದದ ಅಧಿಸೂಚಿತ ಸಂಸ್ಥೆಗಳಿಗೆ ಮತ್ತು ಖಾಸಗಿ ದೇವಸ್ಥಾನಗಳಿಗೆ ವಿವಿಧ ಅಭಿವೃದ್ಧಿಗಳಿಗೆ ಮಾನ್ಯ ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರು ಇವರಿಂದ ಜಿಲ್ಲಾಧಿಕಾರಿಗಳ ಮೂಲಕ ಸಾಮಾನ್ಯ ಸಂಗ್ರಹಣ ನಿಧಿ ಬಿಡಉಗಡೆಯಾಗುತ್ತದೆ. ಈ ಕಛೇರಿಯಿಂದ ಸರಕಾರದ ವಿವಿಧ ಯೋಜನೆಗಳಡಿ ಕಾಮಗಾರಿಗಳಿಗೆ ಅಂದಾಜು ಪತ್ರಕೆ ಮತ್ತು ನಕ್ಷೆಯನ್ನು ಪಡೆದು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಸರಕಾರದಿಂದ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳಿಂದ ಬಿಡುಗಡೆಯಾದ ಹಣವನ್ನು ದೇವಸ್ಥಾನಗಳ ನಿರ್ಮಾಣಕ್ಕೆ ಬಿಡುಗಡೆ ಮಾಡಲಾಗುವುದು. |
ತಸ್ತೀಕ್ /ವರ್ಷಾಸನ |
ಹಲವು ಇನಾಂ ರದ್ದಿಯಾತಿ ಕಾಯ್ದೆಯನ್ವಯ ದೇವಸ್ಥಾನಗಳ ಜಮೀನುಗಳು ವಿಲೇವಾರಿಯಾಗಿದ್ದು ಪರಿಹಾರರ್ಥ ತಸ್ತೀಕ್/ವರ್ಷಾಸನ ನಿಗದಿಯಾಗಿದ್ದು ಮಾನ್ಯ ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರು ಇವರಿಂದ ಜಿಲ್ಲಾಧಿಕಾರಿಗಳ ಮೂಲಕ ತಹಸೀಲ್ದಾರರುಗಳಿಗೆ ಬಿಡುಗಡೆಯಾಗಿ ದೇವಸ್ಥಾನಗಳಿಗೆ ಹಂಚಿಯಾಗುತ್ತದೆ. |
ನಗದು ಸಹಾನುದಾನ |
ಅಧಿಸೂಚಿತ ದೇವಸ್ಥಾನಗಳ ವಾರ್ಷಿಕ ಆದಾಯವು ತುಂಬಾ ಕಡಿಮೆಯಾಗಿದ್ದು, ಆರ್ಥಿಕವಾಗಿ ಸಧೃಡವಲ್ಲದ ದೇವಸ್ಥಾನಗಳ ಪೂಜಾ ಕಾರ್ಯಗಳಿಗೆ ಮತ್ತು ಅರ್ಚಕರ ಸಂಬಳ ನಿತ್ಯಕಟ್ಲೆ, ಹೆಚ್ಚು ಕಟ್ಲೆ ಮತ್ತು ಇತರೆ ವೆಚ್ಚಗಳಿಗಳಿಗಾಗಿ ಮಾನ್ಯ ಆಯುಕ್ತರ ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರು ಇವರಿಂದ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ತಹಸೀಲ್ದಾರರುಗಳಿಗೆ ಬಿಡುಗಡೆಯಾಗಿ ದೇವಸ್ಥಾನಗಳಿಗೆ ಹಂಚಿಕೆಯಾಗುತ್ತದೆ. |
ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳು |
ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 1297 ದೇವಸ್ಥಾನಗಳಿರುತ್ತವೆ. ಅವುಗಳಲ್ಲಿ ‘ಎ’ ಶ್ರೇಣಿ -7 ಮತ್ತು ‘ಬಿ’ ಶ್ರೇಣಿ 12 ‘ಸಿ’ ಶ್ರೇಣಿ-1278 ದೇವಸ್ಥಾನಗಳಿರುತ್ತವೆ. ‘ಎ’ ,ಮತ್ತು ‘ಬಿ’ ದೇವಸ್ಥಾನಗಳಿಗೆ ಸಂಭಂಧಿಸಿದಂತೆ ವಾರ್ಷಿಕ ಆಯ-ವ್ಯಯ ಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯಲಾಗುತ್ತದೆ. ಈ ರೀತಿ ಮಂಜೂರಾತಿ ಪಡೆದ ಆಯ-ವ್ಯಯದಲ್ಲಿ ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ನೆರಳಿನ ವ್ಯವಸ್ಥೆ ವಸತಿ ಸೌಕರ್ಯಗಳ ವ್ಯವಸ್ಥೆ ಕಾಮಗಾರಿಗಳನ್ನು ಕೈಗೊಳ್ಳಲು ಅಂದಾಜು ಪತ್ರಕೆಯನ್ನು ತಯಾರಿಸಿ ಸಕ್ಷಮ ಪ್ರಾಧಿಕಾರದಿಂದ ಆಡಳಿತಾತ್ಮಕ ಮಂಜೂರಾತಿ ಪಡೆದು ಸರ್ಕಾರದ ಏಜನ್ಸಿಯಿಂದ ಪಾರದರ್ಶಕವಾಗಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಮತ್ತು ಆಯಾ ದೇವಸ್ಥಾನಗಳಲ್ಲಿ ಈ ಹಿಂದಿನಿಂದಲೂ ಬಂದ ರೂಢಿ ಸಂಪ್ರಾದಾಯಗಳನ್ನು ಶಾಸ್ತ್ರೋಕ್ತವಾಗಿ ಮತ್ತು ವಿಧಿಬದ್ಧವಾಗಿ ನೆರವೇರಿಸಿಕೊಂಡು ಬರಲಾಗುತ್ತಿದೆ. |
ದೂರವಾಣಿ:08392-270621
ಇಮೇಲ್ :hindureligiousendowmentsbly[at]gmail[dot]com