ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಬಳ್ಳಾರಿ

 ಈ ಕಛೇರಿಯು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಡಿ         ಕಾ‍‍ರ್ಯನಿರ್ವಹಿಸುತ್ತಿದೆ.

ಕಛೇರಿಯ ಕಾರ್ಯಚವಟಿಕೆಗಳು:-

ನೊಂದಣಿ:-  18 ರಿಂದ 35 ವರ್ಷಗಳ ನಿರುದ್ಯೋಗಿ ಅಭ್ಯರ್ಥಿಗಳನ್ನು ಉದ್ಯೋಗಕ್ಕಾಗಿ ನೊಂದಣಿ, ಮರು ನೊಂದಣಿ, ಹಾಗೂ 3 ವರ್ಷಗಳಿಗೊಮ್ಮೆ ನವೀಕರಣ ಮಾಡವುದು, ನೊಂದಣಿ ವೆಬ್ ಸೈಟ್: http://www.kaushalkar.com/

ಶೈಕ್ಷಣಿಕ ಮತ್ತು ವೃತ್ತಿ ಉಪನ್ಯಾಸ:- ನಿರುದ್ಯೋಗಿ ಅಭ್ಯರ್ಥಿಗಳಿಗೆ ಶೈಕ್ಷಣಿಕ ಮತ್ತು ವೃತ್ತಿ ಉಪನ್ಯಾಸ ನೀಡುವುದು. ಇದಕ್ಕಾಗಿ ಶಾಲಾ ಕಾಲೇಜುಗಳಲ್ಲಿ ವೃತ್ತಿ ಉಪನ್ಯಾಸ ಮತ್ತು ಸಮ್ಮೇಳನಗಳನ್ನು ಏರ್ಪಡಿಸುವುದು.

ಪುರಸ್ಕರಣೆ:-ಯಾವುದೇ ಇಲಾಖೆಯು ತನ್ನ ಯಾವುದೇ ಹುದ್ದೆಗಳಿಗೆ ಈ ಕಛೇರಿ ಅಧಿಸೂಚನೆ ಮಾಡಿದರೆ ಅರ್ಹ ಅಭ್ಯರ್ಥಿಗಳನ್ನು ನಿಯಮಾನುಸಾರ ನೊಂದಣಿ ಜೇಷ್ಠತೆ ಮೇಲೆ ಪುರಸ್ಕರಿಸಲಾಗುವುದು.

ಉದ್ಯೊಗ ಮಾರುಕಟ್ಟೆ ವಿಭಾಗ;- ಎಲ್ಲಾ ಕೇಂದ್ರ ಸರ್ಕಾರಿ, ಅರೆ ಕೇಂದ್ರ, ರಾಜ್ಯ ಸರ್ಕಾರಿ, ಅರೆ ರಾಜ್ಯ, ಸ್ಥಳೀಯ, ಖಾಸಗಿ ಅಧಿಸೂಚಿತ ಮತ್ತು ಖಾಸಗಿ ಅನಅಧೀಸೂಚಿತ ಸಂಸ್ಥೆಗಳಿಂದ ಪ್ರತಿ ತ್ರೈಮಾಸಿಕಕ್ಕೂಮ್ಮೆ ಉದ್ಯೋಗಿಗಳ ವಿವರಗಳನ್ನು ನಿಗಧಿತ ಇ.ಅರ್-1 ನಮೂನೆಗಳಲ್ಲಿ ಪಡೆದು, ಕ್ರೂಢೀಕರಿಸಿ ನಿರ್ದೇಶನಾಲಯಕ್ಕೆ ಮತ್ತು ಯೋಜನೆ ಇಲಾಖೆಗೆ ಕಳುಹಿಸುವುದು.

ಸ್ಟಡಿ ಸರ್ಕಲ್:-ಸ್ಟೆಡಿ ಸರ್ಕಲ್ ಯೋಜನೆ ಅಡಿಯಲ್ಲಿ ಕೆ.ಪಿ.ಎಸ್.ಸಿ ಹಾಗೂ ಇತರೆ ಪ್ರಾಧಿಕಾರಗಳು ಅಧಿಸೂಚಿಸಿದ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಉಚಿತ ಪರೀಕ್ಷಾ ಪೂರ್ವ ತರಬೇತಿ ನೀಡುವುದು.

ಉದ್ಯೋಗ ಮೇಳ:-ನಿರುದ್ಯೋಗಿ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ವಿಸಲು ನಿಯಮಿತವಾಗಿ ಖಾಸಗೀ ಸಂಸ್ಥೆಗಳನ್ನು ಅಹ್ವಾನಿಸಿ ಉದ್ಯೋಗ ಮೇಳಗಳನ್ನು ಏರ್ಪಡಿಸುವುದು.

ಕಛೇರಿ ವಿಳಾಸ: ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ,ತಾಲ್ಲೂಕ್ ಕಛೇರಿ ಅವರಣ, ಸ್ಟೇಶನ್ ರಸ್ತೆ,ಬಳ್ಳಾರಿ.

ದೂರವಾಣಿ ಸಂಖ್ಯೆ: 08392-273988, E-mail: eodeebly@yahoo.in