ಕನ್ನಡ ಮತ್ತು ಸಂಸ್ಕೃತಿ ಇಲಾಖೆ

 

ಕನ್ನಡ ಮತ್ತು ಸಂಸ್ಕೃತಿ ಕಾರ್ಯಕ್ರಮ

ಕನ್ನಡ ಮತ್ತು ಸಂಸ್ಕೃತಿ ಕಾರ್ಯಕ್ರಮ

ಕನ್ನಡ ಮತ್ತು ಸಂಸ್ಕೃತಿ ಕಾರ್ಯಕ್ರಮ

ಕನ್ನಡ ಮತ್ತು ಸಂಸ್ಕೃತಿ ಕಾರ್ಯಕ್ರಮ

ಕನ್ನಡ ಮತ್ತು ಸಂಸ್ಕೃತಿ ಕಾರ್ಯಕ್ರಮ

ಕನ್ನಡ ಮತ್ತು ಸಂಸ್ಕೃತಿ ಕಾರ್ಯಕ್ರಮ

ಕನ್ನಡ ಮತ್ತು ಸಂಸ್ಕೃತಿ ಕಾರ್ಯಕ್ರಮ

ಕನ್ನಡ ಮತ್ತು ಸಂಸ್ಕೃತಿ ಕಾರ್ಯಕ್ರಮ

 

 

 

 

 

 

ಕನ್ನಡ ಮತ್ತು ಸಂಸ್ಕೃತಿ ಎರಡು ಪರಸ್ಪರ ಪೂರಕ . ಭಾಷಿಕ ಸಂಸ್ಕೃತಿಯನ್ನು ಪೋಷಿಸುವ ಮತ್ತು ಪ್ರೋತ್ಸಾಹಿಸುವ ಪ್ರಜಾ ಸರ್ಕಾರದ ಜವಬ್ದಾರಿಗಳಿಗೆ ಅನುಗುಣವಾಗಿ 1977 ರಲ್ಲಿ ಭಾಷಾಭಿವೃದ್ಧಿ ಇಲಾಖೆ ಮತ್ತು ಸಂಸ್ಕೃತಿ ನಿರ್ದೇಶನಾಲಯಗಳಾಗಿ ಹಂಚಿ ಹೋಗಿದ್ದ  ಇಲಾಖೆಯ  ಏಕಛತ್ರದಡಿಯಲ್ಲಿ  ಸಂಗಮವಾಗಿ ಕನ್ನಡ ಮತ್ತು ಸಂಸ್ಕೃತಿ  ಇಲಾಖೆಯಾಗಿ ರಚನೆಗೊಂಡು 41 ವರ್ಷಗಳು ತುಂಬಿದೆ.

          ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚಟುವಟಿಕೆಗಳಲ್ಲಿ 2018-19 ನೇ ಸಾಲಿನಲ್ಲಿ ಹಿರಿಯ ಕಲಾವಿದರಿಗೆ ಸಾಂಸ್ಕೃತಿಕ ಸೌರಭ, ಯುವ ಕಲಾವಿದರಿಗೆ ಯುವ ಸೌರಭ, ಮಕ್ಕಳಿಗಾಗಿ ಚಿಗುರು ಕಾರ್ಯಕ್ರಮದಡಿ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ಜಾನಪದ ಸಂಗೀತ, ಜಾನಪದ ನೃತ್ಯ, ನಾಟಕ  ಇತರೆ ಪ್ರಕಾರಗಳಲ್ಲಿ ಅವಕಾಶವನ್ನು ನೀಡಲಾಗಿದೆ. ಈ ಹಿನ್ನಲೆಯಲ್ಲಿ ಕಂಪ್ಲಿಯಲ್ಲಿ ಸಾಂಸ್ಕೃತಿಕ ಸೌರಭ, ಬಳ್ಳಾರಿ ತಾಲ್ಲೂಕಿನ ಬೆಳಗಲ್ ನಲ್ಲಿ ಚಿಗುರು, ಕೊಟ್ಟೂರಿನಲ್ಲಿ ಯುವ ಸೌರಭ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆಯಲಾಯಿತು.

          ಸಾಹಿತ್ಯ ಚಟುವಟಿಕೆಗಳಲ್ಲಿ ಬಳ್ಳಾರಿಯ  ಕೊಟ್ಟೂರುಸ್ವಾಮಿ  ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿಯನ್ನು, ಬಳ್ಳಾರಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲೆಯ ರಂಗಭೂಮಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕೂಡ್ಲಿಗಿಯ ಶ್ರೀಮತಿ ಪಿ.ಪದ್ಮಾ ಅವರ ಜೀವನ ಸಾಧನೆ ಕುರಿತು ವಿಚಾರ  ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

   ಜಿಲ್ಲೆಯಲ್ಲಿ ವಿವಿಧ ಸಂಘಸಂಸ್ಥೆಗಳು ಕೋರಿಕೆ ಮೇರೆಗೆ ಸಾಮಾನ್ಯ / ವಿಶೇಷ ಘಟಕ / ಗಿರಿಜನ ಉಪಯೋಜನೆಯ ಅಡಿಯಲ್ಲಿ ವಿವಿಧ ಕಲಾಪ್ರಕಾರಗಳ ಕಲಾತಂಡಗಳ ಸುಮಾರು 85 ಕಾರ್ಯಮಗಳನ್ನು ಇಲ್ಲಿಯವರೆಗೆ ಪ್ರಾಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ